STIಗಳು ಲೈಂಗಿಕವಾಗಿ ಸಕ್ರಿಯರಾಗಿರುವ ಬಹುತೇಕ ಮಂದಿಗೆ ಜೀವನದಲ್ಲಿ ಒಮ್ಮೆಯಾದರೂ ಉಂಟಾಗುವ ಸಾಮಾನ್ಯ ಸೋಂಕುಗಳು. ಕೆಲವೊಮ್ಮೆ ನಿಮಗೆ ಮತ್ತು ನಿಮ್ಮ ಸಂಗಾತಿಗಳಿಗೆ STI ಇದ್ದರೂ ಅದರ ಯಾವುದೇ ರೋಗಲಕ್ಷಣಗಳು ಕಾಣಿಸದೇ ಇರಬಹುದು. ನಿಮಗ ಅನ್ನಿಸಿದ ಮಾತ್ರಕ್ಕೆ ನಿಮಗೆ STI ಉಂಟಾಗಿದೆ ಎಂದು ಹೇಳಲು ಎಲ್ಲಾ ಸಂದರ್ಭದಲ್ಲಿಯೂ ಸಾಧ್ಯವಿಲ್ಲ. ಆದಾಗ್ಯೂ ನಿಮ್ಮಲ್ಲಿ ಜನನಾಂಗದ ಮೇಲಿನ ಹುಣ್ಣು ಅಥವಾ ಗಂಟುಗಳು, ವಿಚಿತ್ರ ದ್ರವ ಸೋರುವಿಕೆ, ತುರಿಕೆ ಮತ್ತು ಮೂತ್ರ ಮಾಡುವಾಗ ನೋವು, ಮೊದಲಾದ STIನ ರೋಗಲಕ್ಷಣಗಳು ಕಂಡುಬಂದಲ್ಲಿ ನೀವು ತಪಾಸಣೆಗೆ ಒಳಗಾಗಬೇಕಾಗುತ್ತದೆ.
ನಿಮಗೆ STI ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಪರಿಣಾಮಕಾರಿ ವಿಧಾನ. ತಪಾಸಣೆಯ ಬಗ್ಗೆ ಯೋಚಿಸಿದಾಗ ನಿಮಗೆ ಹೆದರಿಕೆಯಾಗಬಹುದು. STIಗೆ ಚಿಕಿತ್ಸೆ ಪಡೆಯದೇ ಇದ್ದರೆ ನಿಮಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಮತ್ತು ನೀವು ನಿಮ್ಮ ಸಂಗಾತಿಗಳಿಗೂ ಸೋಂಕನ್ನು ಹರಡಬಹುದು.
STIಗಳು ಸಾಮಾನ್ಯವಾದ ಸೋಂಕುಗಳೇ ಆದರೂ, ನಿಮಗೆ ಸೋಂಕಾಗಿದೆ ಎಂದು ತಿಳಿದಾಗ ನೀವು ಭಾವೋದ್ವೇಗಕ್ಕೆ ಒಳಗಾಗಬಹುದು. ಬಹುತೇಕ STIಗಳಿಗೆ ಚಿಕಿತ್ಸೆ ಲಭ್ಯವಿದ್ದು, ಅವುಗಳನ್ನು ಔಷಧಗಳ ಮೂಲಕ ಒಂದೆರೆಡು ವಾರಗಳಲ್ಲಿ ಗುಣಪಡಿಸಬಹುದು. HIVಯಂತಹ ಇತರ ಸೋಂಕುಗಳಾದಾಗ, ನಿಮ್ಮಲ್ಲಿನ ಸೋಂಕನ್ನು ಪತ್ತೆಯಾಗದೇ ಇರುವ ಸ್ಥಿತಿಯಲ್ಲಿರಿಸಲು ಮತ್ತು ನಿಮ್ಮಿಂದ ನಿಮ್ಮ ಸಂಗಾತಿಗಳಿಗೆ ಸೋಂಕು ಹರಡುವುದನ್ನು ತಪ್ಪಿಸಲು ದೀರ್ಘಕಾಲೀನ ಚಿಕಿತ್ಸೆಯ ಅಗತ್ಯವಿರುತ್ತದೆ. ನಿಮ್ಮನ್ನು ಸಂಪೂರ್ಣ STI ತಪಾಸಣೆಗೆ ಒಳಪಡಿಸುವಂತೆ ನಿಮ್ಮ ಆರೋಗ್ಯ ಸೇವಾ ಪೂರೈಕೆದಾರರನ್ನು ಹೇಗೆ ಕೇಳುವುದು ಎಂಬುದನ್ನು ಇಲ್ಲಿ ತಿಳಿಯಿರಿ.
ನಿಮಗೆ ನಿಮ್ಮ ತಪಾಸಣೆಯ ಫಲಿತಾಂಶ ತಿಳಿದು, ನೀವು ಚಿಕಿತ್ಸೆ ಪಡೆದ ನಂತರ, ನೀವು ಹಿಂದಿನ ಬಾರಿ ತಪಾಸಣೆ ಮಾಡಿಸಿಕೊಂಡ ನಂತರ ನಿಮ್ಮೊಂದಿಗೆ ಸಂಭೋಗ ನಡೆಸಿದ ಎಲ್ಲಾ ಸಂಗಾತಿಗಳಿಗೆ ಆ ಬಗ್ಗೆ ತಪ್ಪದೆ ತಿಳಿಸಿರಿ. ಅಲ್ಲದೇ ಸುರಕ್ಷಿತ ಲೈಂಗಿಕ ಸಂಭೋಗದ ಕುರಿತು ಅವರೊಂದಿಗೆ ಮಾತನಾಡುವುದನ್ನು ಮುಂದುವರೆಸಿರಿ.
STI ಪರೀಕ್ಷೆಯಿಂದ ಏನೆಲ್ಲಾ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.