ಹಲವು ಕಾರಣಗಳಿಂದಾಗಿ ನೀವು ಲೈಂಗಿಕ ಆಟಿಕೆಗಳು, ಲ್ಯೂಬ್ಸ್ ಅಥವಾ ಬ್ಯಾರಿಯರ್ ವಿಧಾನಗಳಿಗೆ (ಸಂಪರ್ಕ ನಿರೋಧಕ ವಿಧಾನಗಳು, ಉದಾ: ಕಾಂಡೋಂಗಳು) ಪರ್ಯಾಯಗಳನ್ನು ಹುಡುಕಿಕೊಳ್ಳಬೇಕಾಗಬಹುದು. ಈ ವಸ್ತುಗಳು ನಿಮಗೆ ಸುಲಭವಾಗಿ ದೊರೆಯದೇ ಇರಬಹುದು ಅಥವಾ ನೀವು ವಾಸವಿರುವ ಕುಟುಂಬ ಅಥವಾ ಸ್ಥಳಗಳಲ್ಲಿ ಈ ಲೈಂಗಿಕ ಆಟಿಕೆಗಳನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಲೈಂಗಿಕತೆಯ ಕುರಿತು ಎಲ್ಲರಿಗೂ ತಿಳಿದುಬಿಡಬಹುದು, ಅಥವಾ ನೀವು ಲಿಂಗ ಪರಿವರ್ತಿತರಾಗಿದ್ದು, ನಿಮ್ಮ ದೇಹಕ್ಕೆ ಮತ್ತು ನೀವು ನಡೆಸುವ ಲೈಂಗಿಕ ಕ್ರಿಯೆಗೆ ಸರಿಹೊಂದುವ ಬ್ಯಾರಿಯರ್ ವಿಧಾನಗಳು ದೊರೆಯದೇ ಹೋಗಬಹುದು.
ನಿಮ್ಮ ಪರಿಸ್ಥಿತಿ ಏನೇ ಇದ್ದರೂ, ವಸ್ತುಗಳನ್ನು ಅವುಗಳ ನಿಗದಿತ ಉದ್ದೇಶಕ್ಕೆ ಬಳಸುವುದೇ ಒಳ್ಳೆಯದು - ಕಾಕ್ ರಿಂಗ್ (ಶಿಶ್ನವನ್ನು ಉದ್ರೇಕಗಳಿಸಲು ಧರಿಸುವ ಉಂಗುರದಂತಹ ಸಾಧನ) ನಂತೆ ಬಳಸಲು ತಯಾರಾಗಿರುವ ವಸ್ತುವೇ ಅತ್ಯುತ್ತಮ ಕಾಕ್ ರಿಂಗ್ ಆಗಬಲ್ಲದು, ಮತ್ತು ನೈಜವಾದ ಕಾಂಡೊಂ ಮತ್ತು ಡೆಂಟಲ್ ಡ್ಯಾಂಗಳು (ಮುಖ ಮೈಥುನದಲ್ಲಿ ಹಲ್ಲಿನೊಂದಿಗೆ ದೇಹದ ಸಂಪರ್ಕ ತಪ್ಪಿಸಲು ಬಳಸುವ ಸಾಧನ) ಅತ್ಯಂತ ಪರಿಣಾಮಕಾರಿ ಬ್ಯಾರಿಯರ್ ವಿಧಾನಗಳಾಗಬಲ್ಲವು (ಗರ್ಭಾವಸ್ಥೆ ಮತ್ತು STI ತಡೆಗಟ್ಟಲು ಬಳಸುವ ಸಾಧನಗಳು). ಆದಾಗ್ಯೂ, ಸರಿಯಾಗಿ ಬಳಸಿದರೆ ಸುರಕ್ಷಿತವಾದ ಪರ್ಯಾಯಗಳಾಗಬಲ್ಲ ಕೆಲ ಆಯ್ಕೆಗಳೂ ಲಭ್ಯವಿವೆ
ಲೈಂಗಿಕ ಆಟಿಕೆಗಳಿಗೆ ಪರ್ಯಾಯಗಳು
ಮನೆಯಲ್ಲಿ ಅನೇಕ ಬಗೆಯ ಲೈಂಗಿಕ ಆಟಿಕೆಗಳು ದೊರೆಯುತ್ತವೆ. ನಿಮಗೆ ಬೇಕಾಗಿರುವುದು ಡಿಲ್ಡೋ ಆಗಿರಲಿ, ಕಾಕ್ ರಿಂಗ್ (ಶಿಶ್ನದ ಸುತ್ತಲೂ ಧರಿಸುವ ಬಳೆಯಂತಹ ಸಾಧನ) ಆಗಿರಲಿ ಅಥವಾ ಇಂಪ್ಯಾಕ್ಟ್ ಪ್ಲೇಗಾಗಿ (ಒರಟಾಗಿ ಹೊಡೆದುಕೊಂಡು ಉದ್ರೇಕಗೊಳಿಸುವ ಕ್ರಿಯೆ) ಬೇಕಾಗುವ ವಸ್ತುಗಳೇ ಇರಲಿ, ಅವುಗಳನ್ನು ನಿಮ್ಮ ಅಗತ್ಯಕ್ಕೆಂದು ಬಳಸುವಾಗ ಆಗಬಹುದಾದ ಹಾನಿಯನ್ನು ತಪ್ಪಿಸುವುದು ಹೇಗೆಂಬುದು ತಿಳಿದಿರುವುದು ಅವಶ್ಯಕ.
ನೀವು ಮನೆಯ ವಸ್ತುಗಳನ್ನು ಡಿಲ್ಡೋ (ಗುದದ್ವಾರ ಅಥವಾ ಯೋನಿಯೊಳಗೆ ಶಿಶ್ನದ ಬದಲು ತೂರಿಸಿಕೊಳ್ಳುವ ಸಾಧನ) ಆಗಿ ಬಳಸುವುದಾದರೆ, ಸೋಂಕಾಗುವುದನ್ನು ತಡೆಗಟ್ಟಲು ಅವುಗಳಿಗೆ ತಪ್ಪದೇ ಕಾಂಡೋಂ ಹಾಕಿರಿ. ಬಾಚಣಿಗೆಯ ಹಿಡಿಕೆಗಳು ಮತ್ತು ತರಕಾರಿಗಳು ಅತ್ಯಂತ ಜನಪ್ರಿಯ ಮತ್ತು ಸುಲಭವಾಗಿ ದೊರಕುವ ಆಯ್ಕೆಗಳು. ತರಕಾರಿಗಳ ಮೇಲ್ಮೈ ಸಂಪೂರ್ಣವಾಗಿ ಮೃದುವಾಗಿರುವುದಿಲ್ಲ, ಹಾಗಾಗಿ ಅವುಗಳಿಂದ ಕಾಂಡೋಂ ನಲ್ಲಿ ಸಣ್ಣ ತೂತುಗಳಾಗಿ ಬ್ಯಾಕ್ಟೀರಿಯಾದ ಸೋಂಕಾಗಬಹುದು. ನೀವು ನಿಮ್ಮ ಗುದದ್ವಾರದೊಳಗೆ ಯಾವುದೇ ಬಗೆಯ ಡಿಲ್ಡೋ ಹಾಕಿಕೊಂಡರೂ ಅದರ ತಳ ಅಗಲವಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ, ಹಾಗೆ ಮಾಡುವುದರಿಂದ ಆ ವಸ್ತು ನಿಮ್ಮ ದೇಹದೊಳಗೆ ಸಿಕ್ಕಿ ಹಾಕಿಕೊಳ್ಳುವುದನ್ನು ತಡೆಗಟ್ಟಬಹುದು.
ನೀವು ವಿದ್ಯುತ್ಚಾಲಿತ ಟೂತ್ ಬ್ರಶ್ ನ ಹಿಡಿಕೆ ಅಥವಾ ನಿಮ್ಮ ಫೋನ್ ನಂತಹ ವಸ್ತುಗಳನ್ನು ವೈಬ್ರೇಟರ್ ನಂತೆ ಬಳಸುತ್ತಿದ್ದಲ್ಲಿ, ಅವುಗಳು ನೀರು ನಿರೋಧಕವಾಗಿವೆಯೇ ಎಂಬುದನ್ನು ತಿಳಿದಿರುವುದು ಅವಶ್ಯಕ. ಇಂತಹ ವಸ್ತುಗಳಿಗೆ ಕಾಂಡೋಂ ಹಾಕಿಯೇ ಬಳಸಿರಿ ಮತ್ತು ಅವುಗಳನ್ನು ನಿಮ್ಮ ದೇಹದ ಹೊರಗಿನ ಭಾಗಗಳನ್ನು ಉದ್ರೇಕಗೊಳಿಸಲು ಮಾತ್ರ ಬಳಸಿರಿ.
ಕಾಕ್ ರಿಂಗ್ ಗಳನ್ನು ಕೂಡ ನಿಮ್ಮ ಬಳಿಯಲ್ಲಿರುವ ವಸ್ತುಗಳಿಂದಲೇ ತಯಾರಿಸಬಹುದು. ಶಿಶ್ನಕ್ಕೆ ಹಾಕಿಕೊಳ್ಳುವ ಕಾಂಡೋಂನ ಪ್ಲ್ಯಾಸ್ಟಿಕ್ ರಿಂಗನ್ನು ಹೊರತೆಗೆದು ಅದನ್ನು ಕಾಕ್ ರಿಂಗ್ ನಂತೆ ಬಳಸಬಹುದು. ಕಾಕ್ ರಿಂಗ್ ಗಳನ್ನು ನಿಯಮಿತ ಸಮಯದವರೆಗೆ ಮಾತ್ರ ಧರಿಸಬೇಕು ಮತ್ತು ಅದನ್ನು ನಿಮ್ಮ ಶಿಶ್ನ ನಿಮಿರಿದಾಗಲೂ ಹೊರತೆಗೆಯಲು ಸಾಧ್ಯವಾಗುವಂತೆ ಬಳುಕುವ ವಸ್ತುವಿನಿಂದಲೇ ತಯ್ಯಾರಿಸಬೇಕು. ನಿಮಗೆ ಕಿರಿಕಿರಿಯೆನಿಸತೊಡಗಿದರೆ ಅಥವಾ ತರಚುಗಾಯವಾಗಿರುವುದು ಕಂಡುಬಂದರೆ, ಆ ರಿಂಗನ್ನು ಕೂಡಲೇ ತೆಗೆದುಹಾಕಿರಿ. ಅದನ್ನು ತೆಗೆಯಲು ಸಾಧ್ಯವಾಗದಿದ್ದರೆ, ತಕ್ಷಣವೇ ವೈದ್ಯರ ಸಹಾಯ ಪಡೆಯಿರಿ.
ದಿಂಬುಗಳು ಮತ್ತು ಕಾಲ್ಚೀಲಗಳನ್ನು ಹಸ್ತಮೈಥುನದ ಸ್ಲೀವ್ ಗಳಂತೆ ಬಳಸಬಹುದು. ಬಟ್ಟೆಯ ಪಿನ್ ಗಳನ್ನು ಮೊಲೆ ತೊಟ್ಟಿಗೆ ತೊಡಿಸುವ ಕ್ಲ್ಯಾಂಪ್ ಗಳಂತೆ ಬಳಸಬಹುದು ಮತ್ತು ಬೆಲ್ಟ್, ಸ್ಪಾಚ್ಯುಲಾ ಅಥವಾ ಮರದ ಚಮಚಗಳನ್ನು ಬಾಂಡೇಜ್ (ಸಂಗಾತಿಯನ್ನು ಕಟ್ಟಿಹಾಕಿ ಒರಟಾದ ಲೈಂಗಿಕ ಕ್ರಿಯೆ ನಡೆಸುವುದು) ಮತ್ತು ಇಂಪ್ಯಾಕ್ಟ್ ಪ್ಲೇಗಾಗಿ ಬಳಸಬಹುದು. ಈ ಎಲ್ಲಾ ಲೈಂಗಿಕ ಆಟಿಕೆಗಳ ವಿಚಾರದಲ್ಲಿ ಎದುರಾಗಬಹುದಾದ ಅಪಾಯಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಅಂಥ ಅಪಾಯಗಳನ್ನು ತಪ್ಪಿಸಲು ಸೂಕ್ತ ಮುಂಜಾಗ್ರತೆ ವಹಿಸಿರಿ.
ಲೈಂಗಿಕ ಆಟಿಕೆಗಳ ಪರ್ಯಾಯಗಳ ವಿಚಾರದಲ್ಲಿ ತಿಳಿದಿರಲೇಬೇಕಾದ ವಿಷಯಗಳು ಹೀಗಿವೆ: ನಿಮ್ಮ ದೇಹದೊಳಗೆ ಹರಿತವಾದ ವಸ್ತುಗಳನ್ನು ಅಥವಾ ವಿದ್ಯುತ್ಚಾಲಿತ ವಸ್ತುಗಳನ್ನು ತೂರಿಸಬೇಡಿ; ಎಲ್ಲಾ ವಸ್ತುಗಳಿಗೆ ಕಾಂಡೋಂ ಹಾಕಿರಿ; ಹಾಗು, ನಿಮ್ಮ ದೇಹದೊಳಗೆ ಸುಲಭವಾಗಿ ಮುರಿದುಕೊಳ್ಳಬಲ್ಲ ವಸ್ತುಗಳನ್ನು ಬಳಸಬೇಡಿ.
ಜಾರು ದ್ರವಗಳ (ಲ್ಯೂಬ್) ಪರ್ಯಾಯಗಳು
ಲ್ಯೂಬ್ ಲೈಂಗಿಕ ಕ್ರಿಯೆಯ ಪ್ರಮುಖವಾದ ಭಾಗವಾಗಿದ್ದು, ಲೈಂಗಿಕ ಕ್ರಿಯೆಯನ್ನು ಆರಾಮದಾಯಕವಾಗಿಸುತ್ತದೆ ಮತ್ತು STI ಹರಡುವಿಕೆಯ ಅಪಾಯವನ್ನು ತಗ್ಗಿಸುತ್ತದೆ. ಉಗುಳು ಮತ್ತು ಇತರ ದಿನಬಳಕೆಯ ವಸ್ತುಗಳನ್ನು ಲ್ಯೂಬ್ ನ ಬದಲು ಬಳಸಬಹುದು. Refinery29 ನಲ್ಲಿ ಲ್ಯೂಬ್ ನ ಒಳ್ಳೆಯ ಪರ್ಯಾಯಗಳ ಪಟ್ಟಿಯಿದೆ. ಅದು ಇಲ್ಲಿ ಲಭ್ಯವಿದೆ.
ನೀವು STI ಅಥವಾ ಗರ್ಭಧಾರಣೆಯನ್ನು ತಡೆಗಟ್ಟಲು ಕಾಂಡೋಂಗಳನ್ನು ಬಳಸುತ್ತಿದ್ದಲ್ಲಿ, ನೀವು ಬಳಸುವ ಲ್ಯೂಬ್ ನ ಪರ್ಯಾಯದಲ್ಲಿ ಯಾವುದೇ ಬಗೆಯ ಎಣ್ಣೆ ಅಂಶ ಇರಬಾರದು. ಎಣ್ಣೆಯು ಕಾಂಡೋಂಗಳನ್ನು ಒಡೆಯುವಂತೆ ಮಾಡಿ ಅವುಗಳು ಪರಿಣಾಮಕಾರಿಯಾಗದಂತೆ ಮಾಡಬಹುದು.
ಲ್ಯೂಬ್ ಮತ್ತು ಲ್ಯೂಬ್ ಪರ್ಯಾಯಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಸೆಂಟರ್ ಫಾರ್ ಸೆಕ್ಷುವಲ್ ಪ್ಲೆಷರ್ ಅಂಡ್ ಹೆಲ್ತ್ ರವರ ಗೈಡ್ ಟು ಲ್ಯೂಬ್ ಅನ್ನು ಇಲ್ಲಿ ನೋಡಿರಿ.
ದೇಹ ಸಂಪರ್ಕ ತಡೆಗಟ್ಟುವ (ಬ್ಯಾರಿಯರ್) ವಿಧಾನಗಳ ಪರ್ಯಾಯಗಳು
ಕಾಂಡೋಂ ಮತ್ತು ಡೆಂಟಲ್ ಡ್ಯಾಂನಂತಹ ದೇಹ ಸಂಪರ್ಕ ತಡೆಗಟ್ಟುವ ಸಾಧನಗಳಿಗೆ ಪರ್ಯಾಯಗಳನ್ನು ಹುಡುಕುವುದು ಕಷ್ಟ. ನಿಮ್ಮ ಬಳಿ ಕಾಂಡೋಂ ಅಥವಾ ಡೆಂಟಲ್ ಡ್ಯಾಂ ಇಲ್ಲದಿರುವಾಗ ಅವಕ್ಕೆ ಪರ್ಯಾಯವಾಗಿ ನೀವೇ ತಯಾರಿಸಬಹುದಾದ ದೇಹ ಸಂಪರ್ಕ ತಡೆಯುವ ಸಾಧನಗಳ ಸಂಖ್ಯೆ ಅತ್ಯಂತ ಕಡಿಮೆ.
ಪ್ಲಾಸ್ಟಿಕ್ ಚೀಲ ಮತ್ತು ಪ್ಲಾಸ್ಟಿಕ್ ಹಾಳೆಯಂತಹ ವಸ್ತುಗಳನ್ನು ಯಾವುದೇ ರೀತಿಯ ಒಳತೂರಿಸುವಿಕೆಯನ್ನು ಒಳಗೊಂಡ ಲೈಂಗಿಕ ಕ್ರಿಯೆಗೂ ಕಾಂಡೋಂ ರೀತಿಯಲ್ಲಿ ಬಳಸಬಾರದು. ಲೈಂಗಿಕ ದ್ರವಗಳು ದೇಹದ ಒಳಗೇ ಉಳಿಯುವಂತೆ ಮಾಡುವುದು ಕಾಂಡೋಂಗಳ ಉದ್ದೇಶ. ಇಂಥಾ ವಸ್ತುಗಳಿಂದ ಕಾಂಡೋಂಗಳನ್ನು ತಯಾರಿಸಲು ಪ್ರಯತ್ನಿಸುವುದರಿಂದ, STI ಗಳು ಅಥವಾ ಗರ್ಭಧಾರಣೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಆಗುವುದಿಲ್ಲ.
ಆದಾಗ್ಯೂ, ಶಿಶ್ನಕ್ಕೆ ಹಾಕಿಕೊಳ್ಳುವ ಕಾಂಡೋಂ, ಲೇಟೆಕ್ಸ್ ಇರುವ ಅಥವಾ ಇಲ್ಲದಿರುವ ಕೈಗವಸುಗಳು ಅಥವಾ ಮೈಕ್ರೋವೇವ್ ಗೆ ಸೂಕ್ತವಲ್ಲದ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಿ ಮುಖಮೈಥುನದ ಸಂದರ್ಭದಲ್ಲಿ ಗುದದ್ವಾರ ಅಥವಾ ಯೋನಿಯನ್ನು ಮುಚ್ಚುವ ಡೆಂಟಲ್ ಡ್ಯಾಮ್ ತಯಾರಿಸಬಹುದು. ಪ್ಲಾಸ್ಟಿಕ್ ಹಾಳೆಗಳಿಂದ ಉಸಿರುಗಟ್ಟುವ ಅಪಾಯವಿದೆ ಎಂಬುದರ ಬಗ್ಗೆ ನಿಮಗೆ ಎಚ್ಚರವಿರಲಿ
ನಾವು ತಿಳಿಸಿದ ಯಾವ ಪರ್ಯಾಯಗಳನ್ನೂ ಕಾಂಡೋಂನಂತೆ ಬಳಸುವ ಹಾಗಿಲ್ಲ ಮತ್ತು STI ಹರಡುವಿಕೆ ಅಥವಾ ಗರ್ಭಧಾರಣೆಯನ್ನು ತಡೆಯಲು ಅವುಗಳ ಮೇಲೆ ಅವಲಂಬಿಸುವಂತಿಲ್ಲ.
ಲೈಂಗಿಕ ಆಟಿಕೆಗಳು, ಲ್ಯೂಬ್ ಅಥವಾ ಬ್ಯಾರಿಯರ್ ವಿಧಾನಗಳ ಬಗೆಗೆ ನಿಮ್ಮಲ್ಲಿ ಪ್ರಶ್ನೆಗಳಿದ್ದಲ್ಲಿ, ಪ್ಲ್ಯಾನ್ಡ್ ಪೇರೆಂಟ್ ಹುಡ್ ರವರ ಆರೋಗ್ಯ ಶಿಕ್ಷಕರೊಂದಿಗೆ ಇಲ್ಲಿ ಚ್ಯಾಟ್ ಮಾಡಬಹುದು.