ನಮಗೆ ನಮ್ಮ ಬಳಕೆದಾರರಿಂದ ಸಮುದಾಯದಲ್ಲಿ ಬಳಕೆಯಲ್ಲಿರುವ ಪದಪುಂಜಗಳು ಮತ್ತು ಪ್ರವೃತ್ತಿಗಳ ಬಗೆಗಿನ ಪ್ರಶ್ನೆಗಳು ಆಗಾಗ ಬರುತ್ತಿರುತ್ತವೆ. ಅಂತಹ ಪದಗಳಲ್ಲಿ "ಪಾಪರ್ಸ್" ಪದ ಕೂಡಾ ಒಂದು. ರಾಸಾಯನಿಕ ವಸ್ತುಗಳಾಗಿರುವ ಪಾಪರ್ಸ್ ಗಳನ್ನು ಕೆಲವೊಮ್ಮೆ ಲೈಂಗಿಕ ಸಂಭೋಗದ ಸಂದರ್ಭದಲ್ಲಿ ಬಳಸಲಾಗುತ್ತದೆ ಮತ್ತು ಅವುಗಳನ್ನು ಔಪಚಾರಿಕವಾಗಿ ಆಲ್ಕೈಲ್ ನೈಟ್ರೈಟ್ಸ್ ಎಂದು ಕರೆಯಲಾಗುತ್ತದೆ. ಪಾಪರ್ಸನ್ನು ಸಣ್ಣ ಬಾಟಲಿಗಳಲ್ಲಿ ದ್ರವರೂಪದಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಬಾಟಲಿಯನ್ನು ತೆರೆಯುತ್ತಿದ್ದಂತೆ ಇದು ಅನಿಲವಾಗಿ ಬದಲಾಗುತ್ತದೆ.
ಪಾಪರ್ಸ್ ಅನಿಲವನ್ನು ಆಘ್ರಾಣಿಸಿದಾಗ ನಿಮ್ಮ ರಕ್ತನಾಳಗಳು ಅಗಲವಾಗುತ್ತವೆ ಮತ್ತು ಇದರಿಂದ ರಕ್ತದೊತ್ತಡ ಕಡಿಮೆಯಾಗಿ ನಿಮ್ಮ ಎದೆ ಬಡಿತದ ವೇಗ ಹೆಚ್ಚುತ್ತದೆ. ಇದರಿಂದ ನಿಮಗೆ ತಲೆ ಹಗುರವಾದಂತೆ ಎನಿಸಬಹುದು ಮತ್ತು ನಿಮ್ಮ ದೇಹ ಬೇಗನೇ ಬೆಚ್ಚಗಾಗುತ್ತದೆ. ಪಾಪರ್ಸ್ ನ ಪ್ರಭಾವ ಕೆಲವು ಕ್ಷಣಗಳಿಂದ ಕೆಲ ನಿಮಿಷಗಳವರೆಗೆ ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆ ಪಾಪರ್ಸ್ ನಿಂದ ತಲೆನೋವು ಮತ್ತು ಸಾಮಾನ್ಯವಾದ ತಲೆತಿರುಗುವಿಕೆ ಉಂಟಾಗಬಹುದು.
ಬಹುತೇಕ ದೇಶಗಳಲ್ಲಿ ಪಾಪರ್ಸ್ ಸೇವಿಸುವುದು ಕಾನೂನುಬಾಹಿರವಲ್ಲ. ಆದರೂ ಅವುಗಳನ್ನು ತಪ್ಪಾದ ಕ್ರಮದಲ್ಲಿ ಸೇವಿಸಿದಾಗ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಅವುಗಳ ಪರಿಣಾಮ ಮಧ್ಯ ಸೇವನೆಯ ಪರಿಣಾಮದಂತೆಯೇ ಇರುತ್ತದೆ. ಪ್ರತಿಯೊಬ್ಬರೂ ಪಾಪರ್ಸ್ ಗೆ ಬೇರೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ ಮತ್ತು ಒಬ್ಬ ವ್ಯಕ್ತಿಯು ಪಾಪರ್ಸ್ಗಳನ್ನು ಬೇರೆ ಬೇರೆ ಸಂದರ್ಭದಲ್ಲಿ ತೆಗೆದುಕೊಂಡಾಗಲೂ ಅವು ಬೇರೆ ಬೇರೆ ರೀತಿಯ ಪರಿಣಾಮ ಬೀರಬಹುದು. ಸ್ಯಾನ್ ಫ್ರಾನ್ಸಿಸ್ಕೋ ಏಡ್ಸ್ ಪ್ರತಿಷ್ಠಾನ ಮಾಡುವ ಶಿಫಾರಸು ಹೀಗಿದೆ: "ನೀವು ಈ ಮೊದಲು ಪಾಪರ್ಸ್ ಬಳಸಿಲ್ಲದಿದ್ದರೆ, ಮೊದಲು ಅನಿಲವನ್ನು ಅಲ್ಪ ಸಮಯದವರೆಗೆ ಮಾತ್ರ ಆಘ್ರಾಣಿಸಲು ಪ್ರಯತ್ನಿಸಿರಿ ಮತ್ತು ಆಘ್ರಾಣಿಸುವ ಅನಿಲದ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಿರಿ"
ಪಾಪರ್ಸ್ ನಿಂದ ನಿಮ್ಮ ರಕ್ತದೊತ್ತಡ ಹೆಚ್ಚುವುದರಿಂದ, ಅವುಗಳ ಜೊತೆಗೆ ವೈದ್ಯರು ಶಿಫಾರಸು ಮಾಡಿರುವ ಔಷಧಿಗಳು ಅಥವಾ ಇತರ ವಸ್ತುಗಳನ್ನು ಸೇವಿಸಿದರೆ ಸಮಸ್ಯೆಗಳು ಒಂಟಾಗಬಹುದು. ನೀವು ಶಿಶ್ನ ನಿಮಿರುವಿಕೆಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಅದರ ಜೊತೆಗೆ ಪಾಪರ್ಸ್ ತೆಗೆದುಕೊಳ್ಳುವುದರಿಂದ ನಿಮ್ಮ ರಕ್ತದೊತ್ತಡವು ಅಪಾಯಕಾರಿ ಮಟ್ಟಕ್ಕೆ ಕುಸಿಯಬಹುದು. ಎಕ್ಸ್ಟಸೀ, ಸ್ಪೀಡ್ ಮತ್ತು ಮೆಥ್ ಮೊದಲಾದ ಕಾನೂನುಬಾಹಿರ ಮಾದಕ ದ್ರವ್ಯಗಳ ಜೊತೆಗೆ ಪಾಪರ್ಸ್ ಬಳಸಿದರೆ ನಿಮ್ಮ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ಒಂದೊಮ್ಮೆ ಬಾಟಲಿಯಲ್ಲಿರುವ ದ್ರವ ರೂಪದ ಪಾಪರ್ಸ್ ಹೊರಚೆಲ್ಲಿದರೆ ನಿಮ್ಮ ಮೂಗು ಮತ್ತು ಬಾಯಿಯ ಸುತ್ತಲೂ ರಾಸಾಯನಿಕದಿಂದ ಗಂಭೀರವಲ್ಲದ ಸುಟ್ಟಗಾಯಗಳಾಗಬಹುದು.
ಪಾಪರ್ಸ್ ಸೇವನೆಯಿಂದ ಲೈಂಗಿಕ ಸಂಭೋಗದ ಸಮಯದಲ್ಲಿ ನಿಮ್ಮ ಮನಸ್ಸಿನ ಮೇಲಿನ ಹಿಡಿತ ತಪ್ಪಬಹುದು. ಹಾಗಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಪಾಪರ್ಸ್ ಹೇಗೆ ಬಳಸಬೇಕು ಮತ್ತು ಸುರಕ್ಷಿತ ಸಂಭೋಗಕ್ಕಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಜೊತೆಗೆ ನಿಮ್ಮ HIV ಮತ್ತು STI ಸ್ಥಿತಿ ಹಾಗೂ ಕಾಂಡೋಂ ಬಳಸುವ ಕುರಿತು ತಪ್ಪದೇ ಮೊದಲೇ ಮಾತನಾಡಿಕೊಂಡಿರಿ. ಮಾದಕ ಪದಾರ್ಥಗಳು ಮತ್ತು ನಿಮ್ಮ ಸಾಮಾನ್ಯ ಯೋಗಕ್ಷೇಮದ ಕುರಿತು ಏನಾದರೂ ಪ್ರಶ್ನೆಗಳಿದ್ದರೆ ನಿಮ್ಮ ಆರೋಗ್ಯಸೇವಾ ಪೂರೈಕೆದಾರರನ್ನು ಭೇಟಿಯಾಗಿ ಎಂಬುದು ನಮ್ಮ ಸಲಹೆ.
ಪಾಪರ್ಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು