ಒಪ್ಪಿಗೆ ಎಂಬುದು, ನಿಮ್ಮ ಮತ್ತು ಇತರ ವ್ಯಕ್ತಿಗಳ ನಡುವಿನ ಒಪ್ಪಂದವಾಗಿದ್ದು, ಅದು ನೀವು ಮತ್ತು ಅವರು ಜೊತೆಯಾಗಿ ಏನು ಮಾಡಬಯಸುತ್ತೀರಿ ಎಂಬುದನ್ನು ವ್ಯಾಖ್ಯಾನಿಸುತ್ತದೆ. ಹೊಸ ಸಹೋಗ್ಯೋಗಿಯೊಬ್ಬರನ್ನು ಅಪ್ಪಿಕೊಳ್ಳುವ ಮೊದಲು ಅವರಿಗೆ ಅದು ಹಿಡಿಸುತ್ತದೆಯೇ ಎಂದು ಕೇಳುವುದು, ಅಥವಾ ಗ್ರೈಂಡರ್ ನಲ್ಲಿ ಭೇಟಿಯಾದವರಿಗೆ ನಮಗೆ ಯಾವ ಬಗೆಯ ಲೈಂಗಿಕ ಕ್ರಿಯೆಗಳು ಹಿಡಿಸುತ್ತವೆ ಎಂಬುದರ ಬಗೆಗೆ ತಿಳಿಸುವುದು ಮೊದಲಾದ ಅಭ್ಯಾಸಗಳ ಮೂಲಕ ನಾವು ನಮ್ಮ ದೈನಂದಿನ ಜೀವನದಲ್ಲಿ ಒಪ್ಪಿಗೆಯ ತತ್ವವನ್ನು ಪಾಲಿಸಬಹುದು.
ಲೈಂಗಿಕ ಸಂಬಂಧಗಳ ವಿಚಾರದಲ್ಲಿ ಒಪ್ಪಿಗೆಯ ತತ್ವವನ್ನು ಪಾಲಿಸಿದಾಗ, ಎಲ್ಲರಿಗೂ ಅವರು ಬಯಸುವ ಸಂಗತಿಗಳು ಅವರಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ದೊರಕುತ್ತವೆ. ಒಪ್ಪಿಗೆಗೆ ಮುಕ್ತವಾದ ಸಂವಹನ ಅತ್ಯಗತ್ಯ ಮತ್ತು ಈ ಸಂವಹನ ಎರಡು ರೀತಿಯಲ್ಲಿ ನಡೆಯುತ್ತದೆ : ಒಪ್ಪಿಗೆ ಕೊಡುವುದು ಮತ್ತು ಒಪ್ಪಿಗೆ ಪಡೆಯುವುದು.
ನಿಮ್ಮ ಸಂಗಾತಿಗೆ ನಿಮ್ಮ ಜೊತೆ ಭದ್ರತೆಯ ಭಾವನೆ ದೊರೆತಿದೆ, ನಿಮ್ಮ ಮೇಲೆ ನಂಬಿಕೆ ಮೂಡಿದೆ ಮತ್ತು ಅವರಿಗೆ ಸಂತೋಷವಾಗುತ್ತಿದೆ ಎಂಬುದರ ಸ್ಪಷ್ಟ ಮತ್ತು ಉತ್ಸಾಹಪೂರ್ವಕ ಧೃಢೀಕರಣ ದೊರೆತಾಗ ನೀವು ಅವರ ಒಪ್ಪಿಗೆ ಪಡೆದಿದ್ದೀರಿ ಎಂದರ್ಥ. ಇದನ್ನು ಹಲವು ರೀತಿಯಲ್ಲಿ ಪಡೆಯಬಹುದು, ಉದಾಹರಣೆಗೆ, ಪ್ರಶ್ನೆಗಳನ್ನು ಕೇಳುವುದು ("ನಾನು ನಿನ್ನ ಅಂಗಿಯನ್ನು ಕಳಚಲೇ?") ಮತ್ತು ಸೂಚನೆಗಳನ್ನು ನೀಡುವುದು ("ನಾನು ನಿನ್ನನ್ನು ಚುಂಬಿಸಬಹುದೇ?"). ನಿಮ್ಮ ಸಂಗಾತಿಯನ್ನು ಕೇಳಿ ಅವರ ಒಪ್ಪಿಗೆ ಪಡೆದಾಗ ನೀವಿಬ್ಬರೂ ನಿಮ್ಮ ನಿಮ್ಮ ಮಿತಿಗಳನ್ನು ಅರ್ಥೈಸಿಕೊಂಡು ಅವುಗಳನ್ನು ಗೌರವಿಸಿದಂತಾಗುತ್ತದೆ.
ನಿಮಗೆ ಆನಂದವಾಗುತ್ತಿದೆ ಮತ್ತು ನಡೆಯುತ್ತಿರುವ ಎಲ್ಲಾ ಕ್ರಿಯೆಗಳಿಗೆ ನಿಮಗೆ ಸಮ್ಮತಿಯಿದೆ ಎಂಬುದನ್ನು ನಿಮ್ಮ ಸಂಗಾತಿಗೆ ತಿಳಿಸಿದಾಗ ನೀವು ಒಪ್ಪಿಗೆ ನೀಡಿದಂತಾಗುತ್ತದೆ. ನೀವು "ಹೌದು" ಎನ್ನುವ ಮೌಖಿಕ ಸಮ್ಮತಿಯ ಮೂಲಕ ಅಥವಾ ಆನಂದವನ್ನು ಸೂಚಿಸುವ ಮೌನವಾದ ಸೂಚನೆಗಳ ಮೂಲಕ ಒಪ್ಪಿಗೆ ನೀಡಿ, ನಿಮಗೆ ಸಂತೋಷದ ಅನುಭವಾಗುತ್ತಿದೆ ಎಂಬುದನ್ನು ನಿಮ್ಮ ಸಂಗಾತಿಗೆ ತಿಳಿಸಬಹುದು.
ಒಪ್ಪಿಗೆಯನ್ನು ಯಾವುದೇ ಕ್ಷಣದಲ್ಲಿಯೂ ಹಿಂಪಡೆಯಬಹುದು ಎಂಬುದನ್ನು ನೆನಪಿಡುವುದು ಬಹಳ ಮುಖ್ಯ. ಗ್ರೈಂಡರ್ ನಲ್ಲಿ ಮಾತನಾಡಿಸಿದ್ದ ವ್ಯಕ್ತಿಯನ್ನು ನೇರವಾಗಿ ಭೇಟಿಯಾದಾಗ ಅವರ ಬಗ್ಗೆ ಇದ್ದ ಭಾವನೆ ಬದಲಾದ ಅನುಭವ ನಿಮಗಾಗಿದೆಯೇ? ನಿಮಗೆ ಯಾವಾಗ ಬೇಕಿದ್ದರೂ ನೀವು ಮಾಡ ಬಯಸಿದ್ದ ಕ್ರಿಯೆಯ ಕುರಿತು ಮನಸ್ಸು ಬದಲಾಯಿಸಬಹುದು. ಕ್ರಿಯೆಯೊಂದನ್ನು ನಡೆಸುವ ಬಗ್ಗೆ ಗ್ರೈಂಡರ್ ನಲ್ಲಿ ಒಪ್ಪಿಗೆ ಸೂಚಿಸಿದ್ದ ಮಾತ್ರಕ್ಕೆ ನೇರವಾಗಿ ಭೇಟಿಯಾದಾಗ ಆ ಕ್ರಿಯೆಯನ್ನು ನಡೆಸಲೇಬೇಕು ಎಂಬ ನಿಯಮವಿಲ್ಲ. ಒಟ್ಟಿನಲ್ಲಿ ಯಾವುದೇ ಕ್ರಿಯೆಯನ್ನೂ ಗೌರವಯುತವಾಗಿ ಮತ್ತು ನಿಮಗೆ ಹಿತವೆನಿಸುವಂತೆ ನಡೆಸುವುದು ನಿಮ್ಮ ಮತ್ತು ನಿಮ್ಮ ಸಂಗಾತಿಗಳ ಹಕ್ಕು.
ಒಪ್ಪಿಗೆಯ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ಪ್ಲ್ಯಾನ್ಡ್ ಪೇರೆಂಟ್ ಹುಡ್ ರವರ ಈ ವೀಡಿಯೋ ನೋಡಿರಿ. ಟೀನ್ ವೋಗ್ ನ ಈ ವೀಡಿಯೋಗಳಲ್ಲಿ ಒಪ್ಪಿಗೆಯ ವಿಚಾರದಲ್ಲಿ ಯಾವ ರೀತಿಯ ಸಂವಹನ ನಡೆಸಬೇಕು ಎಂಬುದರ ಉದಾಹರಣೆಗಳಿವೆ.