ಕಾಂಡೋಂ ಬಳಸುವುದು, ಮಾತ್ರೆ ತೆಗೆದುಕೊಳ್ಳುವುದು ಮತ್ತು ಇತರ ದೀರ್ಘಕಾಲೀನ ಪರಿಣಾಮ ಬೀರುವ ವಿಧಾನಗಳ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟಬಹುದು. ಕೆಲವು ಲಿಂಗ ಪರಿವರ್ತಿತ ವ್ಯಕ್ತಿಗಳಿಗೆ ಗರ್ಭಧಾರಣೆಯ ಬಗ್ಗೆ ಯೋಚಿಸಿದಾಗ ತಮ್ಮ ದೇಹದ ಬಗೆಗೆ ಹಿತಕರವಲ್ಲದ ಭಾವನೆಗಳು ಮೂಡಬಹುದು. ಆದರೂ ಗರ್ಭಧರಿಸುವ ಸಾಧ್ಯತೆಯಿರುವ ಸಂದರ್ಭದಲ್ಲಿ ಅದನ್ನು ತಡೆಗಟ್ಟಲು ಲಭ್ಯವಿರುವ ಆಯ್ಕೆಗಳ ಬಗೆಗೆ ತಿಳಿದಿರುವುದು ಅವಶ್ಯಕ.
ಗರ್ಭದಾರಣೆಯ ತಪಾಸಣೆ ಮಾಡಿಸಿಕೊಳ್ಳುವುದು, ಸಂಗಾತಿಯೊಬ್ಬರೊಡನೆ ಗರ್ಭಾವಸ್ಥೆಯ ಬಗೆಗೆ ಮಾತನಾಡುವುದು ಅಥವಾ ಗರ್ಭ ನಿಯಂತ್ರಣ ವಿಧಾನ ಬಳಸುವುದು ಕಷ್ಟವೆನಿಸಲು ಹಲವು ಕಾರಣಗಳಿರಬಹುದು. ಆದರೆ ಅವುಗಳನ್ನು ಮಾಡುವ ಮೂಲಕ ನೀವು ನಿಮ್ಮ ಲೈಂಗಿಕ ಆರೋಗ್ಯದ ಮೇಲೆ ನಿಯಂತ್ರಣ ಸಾಧಿಸಬಹುದು.
ನೀವು ಹಾರ್ಮೋನ್ ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಗರ್ಭ ನಿಯಂತ್ರಣಕ್ಕಾಗಿ ಟೆಸ್ಟೋಸ್ಟಿರೋನ್ ಅಥವಾ ಈಸ್ಟ್ರೋಜನ್ ಮೇಲೆ ಅವಲಂಬಿಸುವುದು ಪರಿಣಾಮಕಾರಿಯಾದ ಕ್ರಮವಲ್ಲ. ಗರ್ಭ ನಿಯಂತ್ರಣವು ನಿಮ್ಮ ಹಾರ್ಮೋನ್ ಚಿಕಿತ್ಸೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂಬ ಆತಂಕವಿದ್ದಲ್ಲಿ, ಪ್ಲ್ಯಾನ್ಡ್ ಪೇರೆಂಟ್ ಹುಡ್ ರವರ ಹಾರ್ಮೋನ್ ಮುಕ್ತ ಪರ್ಯಾಯಗಳ ಪಟ್ಟಿಯಲ್ಲಿ ನಿಮಗೆ ಸರಿಹೊಂದುವ ವಿಧಾನವನ್ನು ಹುಡುಕಿರಿ. ಅನುಮಾನವಿದ್ದರೆ, ಆರೋಗ್ಯ ಸೇವಾ ಪೂರೈಕೆದಾರರೊಂದಿಗೆ ಮಾತನಾಡಿರಿ, ಅವರು ನಿಮಗೆ ಸರಿಹೊಂದುವ ವಿಧಾನವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ.
ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವ ಕುರಿತು ಇತರ ಸಲಹೆಗಳಿಗಾಗಿ, ಸೇಫರ್ ಸೆಕ್ಸ್ ಫಾರ್ ಟ್ರ್ಯಾನ್ಸ್ ಬಾಡೀಸ್ ನೋಡಿರಿ. (ಇಂಗ್ಲೀಷ್ ನಲ್ಲಿ ಮಾಹಿತಿಗಾಗಿ ಕೊಂಡಿ)