STI ಗಳು ಹಲವಾರು ಬಗೆಯಲ್ಲಿ ಹರಡುತ್ತವೆ ಎಂಬುದನ್ನು ಅರಿಯುವುದೇ STI ತಡೆಗಟ್ಟುವಿಕೆಯ ಮೊದಲ ಹೆಜ್ಜೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಪಡೆಯಬಹುದು.
ದೇಹದ ದ್ರವಗಳಾದ ವೀರ್ಯ, ಯೋನಿಯ ಮತ್ತು ಗುದಭಾಗದ ದ್ರವಗಳ ಮೂಲಕ ಹರಡುವ ಕ್ಲಮೈಡಿಯಾ ಮತ್ತು ಗೊನೊರಿಯಾದಂತಹ STIಗಳನ್ನು ತಡಗಟ್ಟುವಲ್ಲಿ ಕಾಂಡೋಂ ಮತ್ತು ಡೆಂಟಲ್ ಡ್ಯಾಮ್ ಗಳು ಪರಿಣಾಮಕಾರಿ ಪಾತ್ರ ನಿರ್ವಹಿಸಿವೆ. ಕಾಂಡೋಂ ಮತ್ತು ಡೆಂಟಲ್ ಡ್ಯಾಮ್ ಗಳು ಚರ್ಮ ಸಂಪರ್ಕದಿಂದ ಹರಡುವ STIಗಳನ್ನು ಮತ್ತು ಗುದದ್ವಾರದ ಮುಖಮೈಥುನದಲ್ಲಿ ತೊಡಗಿದವರಲ್ಲಿ ಬಾಯಿಂದ ಹರಡುವ ಸೋಂಕುಗಳನ್ನೂ ತಡೆಗಟ್ಟಬಲ್ಲವು.
ನೀವು ಕಾಂಡೋಂ ಬಳಸುತ್ತಿಲ್ಲವಾದರೆ, ಲ್ಯೂಬ್ ಬಳಸಿರಿ. ಇದರಿಂದ ನಿಮ್ಮ ಚರ್ಮದ ಮೇಲೆ ಸಣ್ಣ ಸಣ್ಣ ಗಾಯಗಳಾಗುವ ಅಪಾಯವನ್ನು ತಗ್ಗಿಸಿ, ಅವುಗಳ ಮೂಲಕ ನಿಮಗೆ STI ಉಂಟಾಗುವ ಸಾಧ್ಯತೆಯನ್ನು ತಡೆಗಟ್ಟಬಹುದು. ನಿಮಗೆ ಲ್ಯೂಬ್ ಅಥವಾ ಕಾಂಡೋಂಗಳು ದೊರಕುವುದಿಲ್ಲವೆಂದರೆ, ಅವುಗಳ ಪರ್ಯಾಯಗಳ ಬಗ್ಗೆ ಇಲ್ಲಿ ತಿಳಿಯಿರಿ. ಸೋಂಕುಂಟಾಗುವ ಮುನ್ನ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸಿಕೊಂಡರೆ ಹೆಪಾಟೈಟಿಸ್ A ಮತ್ತು HPV ಯಂತಹ ಕೆಲವು STIಗಳನ್ನು ತಡೆಗಟ್ಟಬಹುದು. ರೋಗ ನಿರೋಧಕ ಲಸಿಕೆಗಳನ್ನು ಎಲ್ಲಿ ಮತ್ತು ಹೇಗೆ ಹಾಕಿಸಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯಬಹುದು.
ನೀವು HIV ನೆಗೆಟಿವ್ ಆಗಿದ್ದಲ್ಲಿ, HIV ತಡೆಗಟ್ಟುವ ಅದ್ಭುತವಾದ ಹೊಸ ವಿಧಾನಗಳು ಲಭ್ಯವಿವೆ. PrEP ಎಂಬುದು ದಿನನಿತ್ಯ ಸೇವಿಸುವ ಮಾತ್ರೆಯಾಗಿದ್ದು, ಇದನ್ನು ಲೈಂಗಿಕ ಸಂಭೋಗಕ್ಕೆ ಮೊದಲು ತೆಗೆದುಕೊಂಡರೆ HIV ತಡೆಗಟ್ಟಬಹುದು. ನೀವು ಈಗಾಗಲೇ HIVಯ ಸಂಪರ್ಕಕ್ಕೆ ಬಂದಿದ್ದೀರಿ ಎಂದು ನಿಮಗೆನಿಸಿದರೆ, ಸಂಭೋಗದ ನಂತರದ 72 ಗಂಟೆಗಳೊಳಗೆ PEP ಎಂಬ ಮಾತ್ರೆಯನ್ನು ಸೇವಿಸಿದರೆ HIV ತಡೆಗಟ್ಟಬಹುದು. PrEP ಮತ್ತು PEPಗಳು ಕೇವಲ HIVಯನ್ನು ತಡೆಗಟ್ಟುತ್ತವೆಯೇ ಹೊರತು, ಇತರ STIಗಳನ್ನಲ್ಲ.
ಯಾವಾಗಲೂ ಹೇಳುವಂತೆ, ನೀವು ಯಾವುದೇ ರೀತಿಯ ಲೈಂಗಿಕ ಸಂಭೋಗ ನಡೆಸಿದರೂ, ಪ್ರತಿ 3 ರಿಂದ 6 ತಿಂಗಳುಗಳಿಗೊಮ್ಮೆ STI ತಪಾಸಣೆ ಮಾಡಿಸುವುದರಿಂದ, ನಿಮ್ಮ STI ಸ್ಥಿತಿಯು ನಿಮ್ಮ ನಿಯಂತ್ರಣದಲ್ಲೇ ಇರುತ್ತದೆ. ತಪಾಸಣೆ ಎಲ್ಲಿ ಮಾಡಿಸಿಕೊಳ್ಳಬೇಕು ಎಂಬುದನ್ನು ಇಲ್ಲಿ ಪತ್ತೆ ಮಾಡಿರಿ ಮತ್ತು ನಿಮಗೇನಿಷ್ಟವೋ ಅದನ್ನು ಮಾಡುವುದನ್ನು ಮುಂದುವರೆಸಿರಿ.