ಲೈಂಗಿಕ ಸಂಪರ್ಕದಿಂದ ಉಂಟಾಗುವ ಸೋಂಕುಗಳನ್ನು "ಲೈಂಗಿಕವಾಗಿ ಹರಡುವ ಸೋಂಕುಗಳು (ಸೆಕ್ಷುವಲಿ ಟ್ರಾನ್ಸ್ಮಿಟೆಡ್ ಇಂಫೆಕ್ಷನ್ಸ್) ಎನ್ನಲಾಗುತ್ತದೆ ಮತ್ತು ಅವುಗಳನ್ನು STD ಅಥವಾ STI ಎಂದೂ ಕರೆಯಲಾಗುತ್ತದೆ. ಹಲವಾರು ಬಗೆಯ STI ಗಳಿದ್ದು, ನೀವು ಯಾವ ಬಗೆಯ ಸೋಂಕಿನ ಸಂಪರ್ಕಕ್ಕೆ ಬರುತ್ತೀರಿ ಎಂಬುದು, ನೀವು ಯಾವ ಬಗೆಯ ಲೈಂಗಿಕ ಕ್ರಿಯೆ ನಡೆಸುತ್ತೀರಿ ಎಂಬುದನ್ನು ಅವಲಂಬಿಸುತ್ತದೆ.
ಎಲ್ಲಾ STIಗಳು ಒಂದೇ ಬಗೆಯಲ್ಲಿ ಹರಡುವುದಿಲ್ಲ. ಗೊನೊರಿಯಾ ಮತ್ತು ಕ್ಲಮೈಡಿಯಾದಂತಹ STI ಗಳು ಶಾರೀರಿಕ ದ್ರವಗಳಾದ ವೀರ್ಯ, ಗುದಭಾಗದ ದ್ರವಗಳು ಮತ್ತು ಯೋನಿಯ ದ್ರವಗಳಿಂದ ಹರಡುತ್ತವೆ. ಸಿಫಿಲಿಸ್ ಮತ್ತು ಹರ್ಪೆಸ್ (ಸರ್ಪಸುತ್ತು) ನಂತಹ STIಗಳು ಚರ್ಮ ಸಂಪರ್ಕದ ಮೂಲಕ ಹರಡುತ್ತವೆ.
ಕೆಲವೊಮ್ಮೆ ನಿಮಗೆ ಮತ್ತು ನಿಮ್ಮ ಸಂಗಾತಿಗಳಿಗೆ STI ಇದ್ದರೂ ಅದರ ಯಾವುದೇ ರೋಗಲಕ್ಷಣಗಳು ಕಾಣಿಸದೇ ಇರಬಹುದು. ವ್ಯಕ್ತಿಯೊಬ್ಬರ ಮುಖ ನೋಡಿ ಅವರಿಗೆ STI ಇದೆಯೇ ಇಲ್ಲವೋ ಎಂದು ಹೇಳಲು ಆಗುವುದಿಲ್ಲ. ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಮೊದಲು, ನೀವು ಕಡೆಯ ಬಾರಿ ತಪಾಸಣೆ ಮಾಡಿಸಿಕೊಂಡದ್ದು ಯಾವಾಗ ಎಂಬುದರ ಬಗ್ಗೆ ನಿಮ್ಮ ಸಂಗಾತಿಗಳೊಂದಿಗೆ ಮಾತನಾಡಿ, ಒಟ್ಟಿಗೆ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಒಳ್ಳೆಯದು.
ನಿಮಗಿದು ನೆನಪಿರಲಿ: ನಿಮಗೆ STI ಇದೆ ಎಂದಮಾತ್ರಕ್ಕೆ ನೀವು ಬೇಜಾವಾಬ್ದಾರಿ ವ್ಯಕ್ತಿ ಎಂದರ್ಥವಲ್ಲ. ಬಹುತೇಕ ವ್ಯಕ್ತಿಗಳಿಗೆ ಜೀವನದಲ್ಲಿ ಒಮ್ಮೆಯಾದರೂ STI ಉಂಟಾಗುತ್ತವೆ, ಮತ್ತು ಬಹುತೇಕ ಸೋಂಕುಗಳಿಗೆ ಚಿಕಿತ್ಸೆ ನೀಡುವುದು ಅಥವಾ ಅವುಗಳ ರೋಗಲಕ್ಷಣಗಳನ್ನೂ ನಿಭಾಯಿಸುವುದು ಸುಲಭ. ಆಗಾಗ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮತ್ತು STIಗಳನ್ನು ತಡೆಗಟ್ಟುವ ವಿಧಾನಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ನಿಮಗೆ ಸೋಂಕಾಗುವ ಅಪಾಯ ತಗ್ಗಿಸಬಹುದು.
ನಿರ್ದಿಷ್ಟವಾದ STI ಗಳ ಬಗ್ಗೆ ತಿಳಿಯಲು, ಈ ಸಂಪನ್ಮೂಲವನ್ನು ನೋಡಿರಿ (ಇಂಗ್ಲೀಷ್ ಮತ್ತು ಸ್ಪ್ಯಾನಿಷ್ನಲ್ಲಿ ಲಭ್ಯವಿದೆ)