STI ಉಂಟಾಗಿದೆ ಎಂಬುದನ್ನು ತಿಳಿಯುವುದು ಒಂದು ಭಾವನತ್ಮಕ ಅನುಭವ. ಈ ಸಂದರ್ಭದಲ್ಲಿ ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಕಾಳಜಿವಹಿಸುವುದು ಮುಖ್ಯ.
ನಿಮ್ಮ ಬೆಂಬಲಕ್ಕೆ ನಿಲ್ಲುವ ವ್ಯಕ್ತಿಗಳೊಂದಿಗೆ ಮಾತನಾಡುವ ಮೂಲಕ ನೀವು ನಿಮ್ಮ ಕಾಳಜಿವಹಿಸಿಕೊಳ್ಳಬಹುದು. ನೀವು ನಿಮ್ಮ ಪರಿಸ್ಥಿತಿಯ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗುವ ನಂಬಿಕಸ್ಥ ವ್ಯಕ್ತಿಗಳನ್ನು ಕಂಡುಕೊಂಡಾಗ, ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನಿಮಗೆ ಅತಿಯಾದ ಒಂಟಿತನದ ಅನುಭವವಾಗುವುದಿಲ್ಲ.
ಯಾವ ರೀತಿಯಲ್ಲಿ ತಪಾಸಣೆಯಲ್ಲಿ ಪಾಸಿಟಿವ್ ಎಂದು ತಿಳಿದ ನಂತರ ನೀವು ನಿಮ್ಮ ಆರೋಗ್ಯದ ಮೇಲೆ ನಿಯಂತ್ರಣ ಸಾಧಿಸಿದಿರೋ, ಅದೇ ರೀತಿಯಲ್ಲಿ ನಿಮ್ಮ ಹಿಂದಿನ ಸಂಗಾತಿಗಳಿಗೆ ಅವರೂ STI ಸಂಪರ್ಕಕ್ಕೆ ಬಂದಿರಬಹುದು ಎಂದು ತಿಳಿಸುವ ಮೂಲಕ ನೀವು ಅವರನ್ನೂ ಬೆಂಬಲಿಸಬಹುದು. ನೀವು ನಿಮ್ಮ ತಪಾಸಣೆಯ ಫಲಿತಾಂಶ ಪಾಸಿಟಿವ್ ಆಗಿರುವ ಬಗ್ಗೆ ನಿಮ್ಮ ಹಳೆಯ ಸಂಗಾತಿಗಳಿಗೆ ತಿಳಿಸುವ ಮೂಲಕ, ಅವರು ಶೀಘ್ರವಾಗಿ ತಪಾಸಣೆ ಇಲ್ಲವೇ ಚಿಕಿತ್ಸೆಗೆ ಒಳಗಾಗುವಂತೆ ಮಾಡುತ್ತೀರಿ.
ಸಂಗಾತಿಯೊಬ್ಬರಿಗೆ ತಪಾಸಣೆ ಅಥವಾ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂಬುದನ್ನು ಇಂಥದ್ದೇ ರೀತಿಯಲ್ಲಿ ತಿಳಿಸಬೇಕೆಂಬ ನಿಯಮವಿಲ್ಲ. ನೀವು ನಿಮ್ಮ ಹಳೆಯ ಸಂಗಾತಿಗಳಿಗೆ ಕರೆ ಮಾಡುವ ಮೂಲಕ, ಮೆಸೇಜ್ ಮಾಡುವ ಮೂಲಕ, ಗ್ರೈಂಡರ್ ನಲ್ಲಿ ಸಂದೇಶ ಕಳುಹಿಸುವ ಮೂಲಕ ನೇರವಾಗಿ ವಿಚಾರ ತಿಳಿಸಬಹುದು ಅಥವಾ ಮುಖತಃ ಭೇಟಿಯಾಗಿ ಹೇಳಬಹುದು. ಕೆಲವು ಬಾರಿ ನೀವು ಪಾಸಿಟಿವ್ ಆಗಿದ್ದೀರಿ ಎಂಬುದನ್ನು ಸಂಗಾತಿಯೊಬ್ಬರಿಗೆ ತಿಳಿಸಲು ನಿಮಗೆ ಮುಜುಗರ ಅಥವಾ ನಾಚಿಕೆಯಾಗಬಹುದು ಮತ್ತು ಕೆಲವೊಮ್ಮೆ ಹಾಗೆ ತಿಳಿಸುವುದು ಅಪಾಯಕಾರಿ ಎಂದೂ ಅನಿಸಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಸ್ಥಳೀಯ ಆರೋಗ್ಯ ವಿಭಾಗದಲ್ಲಿ ಲಭ್ಯವಿರುವ ಪಾರ್ಟ್ನರ್ ನೋಟಿಫಿಕೇಶನ್ ಸೇವೆಯನ್ನು ಬಳಸಬಹುದು ಅಥವಾ TellYourPartner.org ಬಳಸಬಹುದು (ಯು.ಎಸ್.ನಲ್ಲಿ ಮಾತ್ರ). ನೀವು ನಿಮ್ಮ ಸಂಗಾತಿಗೆ ಹೇಗೆ ತಿಳಿಸುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ.