PrEP ಎಂಬುದು, HIV ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಬಳಕೆಯಲ್ಲಿರುವ ಹೊಚ್ಚ ಹೊಸ ಮತ್ತು ಅತ್ಯಂತ ಪರಿಣಾಮಕಾರಿ ಆಯುಧಗಳಲ್ಲೊಂದು. ನಿಯಮಿತವಾಗಿ ಸೇವಿಸಿದರೆ ಇದು HIV ಹರಡುವಿಕೆಯನ್ನು ಸಾಕಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲದು. PrEP ಲೈಂಗಿಕ ಕ್ರಿಯೆಯಿಂದ ಹರಡುವ ಇತರ ಖಾಯಿಲೆಗಳನ್ನು ತಡೆಗಟ್ಟುವುದಿಲ್ಲ.
ಸದ್ಯ ಭಾರತದಲ್ಲಿ ಟೆನ್ವಿರ್ EM ಅಥವಾ TDF/FTC ಎಂಬ PrEP ಮಾತ್ರೆಯನ್ನು ಮಾತ್ರ ಅನುಮೋದಿಸಲಾಗಿದ್ದು, ಅದನ್ನು ದಿನನಿತ್ಯ ಬಾಯಿಯ ಮೂಲಕ ಸೇವಿಸಬೇಕಾಗುತ್ತದೆ. ಟೆನ್ವಿರ್ EM ಮತ್ತು TDF/FTC ಅಲ್ಲದೇ ಟ್ರುವಾಡಾ ಮತ್ತು ಡೆಸ್ಕೊವಿ ಎಂಬ ಔಷಧಗಳನ್ನು ಕೆಲವು ದೇಶಗಳಲ್ಲಿ HIV ನೆಗೆಟಿವ್ ವ್ಯಕ್ತಿಗಳ ಬಳಕೆಗಾಗಿ ಅನುಮೋದಿಸಲಾಗಿದ್ದು, ಇನ್ನೂ ಹಲವು ದೇಶಗಳಲ್ಲೂ ಅನುಮೋದನೆ ದೊರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರೇಟರ್ ದಾನ್ ಏಡ್ಸ್ ರವರ ಈ ತೊಂಭತ್ತು ಸೆಕೆಂಡುಗಳ ವೀಡಿಯೋ ನೋಡಿರಿ. (ಇಂಗ್ಲೀಷ್ ನಲ್ಲಿ ಮಾಹಿತಿಗಾಗಿ ಕೊಂಡಿ)