ನಿಮ್ಮ ಆಸುಪಾಸಿನ ಎಚ್.ಐ.ವಿ ತಪಾಸಣಾ ಕೇಂದ್ರಗಳ ಮಾಹಿತಿ ಬೇಕೇ? ಮಾನಸಿಕ ಆರೋಗ್ಯ ಸೇವೆಗಳು ಮತ್ತು ಕಾನೂನು ಸಹಾಯ ಎಲ್ಲಿ ದೊರೆಯುತ್ತವೆ ಎಂದು ತಿಳಿಯಬೇಕೇ? ಗ್ರೈಂಡ್ರ್ ಫಾರ್ ಈಕ್ವಾಲಿಟಿಯು ವಾರ್ತಾ ಟ್ರಸ್ಟ್ ಮತ್ತು ಸಾಥಿ (SAATHI)ಯೊಡಗೂಡಿ ಭಾರತದಲ್ಲಿ ಎಲ್.ಜಿ.ಬಿ.ಟಿ (ಸಲಿಂಗಾಸಕ್ತ ಸ್ತ್ರೀ ಪುರುಷರು, ಉಭಯಲಿಂಗಾಸಕ್ತರು ಮತ್ತು ಲಿಂಗ ಪರಿವರ್ತಿತರು) ಜನರಿಗೆ ಸಹಾಯ ಮಾಡುವ ಸಂಘಟನೆಗಳನ್ನು ಹುಡುಕುವ ವಿಧಾನವನ್ನು ಪ್ರಸ್ತುತ ಪಡಿಸುತ್ತಿದೆ. ಅದನ್ನು ನೋಡಲು ಮೋರ್ (more) ಮೇಲೆ ಟ್ಯಾಪ್ ಮಾಡಿರಿ.