ಈ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ. ಕೆಲವು ಸಂದರ್ಭಗಳಲ್ಲಿ ಈ ವಿಚಾರಗಳನ್ನು ಹೇಳಿಕೊಳ್ಳುವುದು ಸುರಕ್ಶಿತವಿರುವುದಿಲ್ಲ. ಇದು ಮುಖ್ಯವಾಗಿ ಸಲಿಂಗಾಸಕ್ತಿ ಮತ್ತು ಲಿಂಗ ಪರಿವರ್ತನೆ ಕಾನೂನು ಬಾಹಿರವಾಗಿರುವ ಅಥವಾ ವೈದ್ಯರು ಮತ್ತು ರೋಗಿಗಳ ಸಂವಾದದ ಗೋಪ್ಯತೆಗೆ ಕಾನೂನಿನ ರಕ್ಷಣೆಯಿಲ್ಲದಿರುವ ದೇಶಗಳ ಪ್ರಜೆಗಳಿಗೆ ಅನ್ವಯಿಸುತ್ತದೆ.
ಆದಾಗ್ಯೂ, ನಿಮಗೆ ನಿಮ್ಮ ಚಿಕಿತ್ಸಕರ ಮೇಲೆ ಭರವಸೆಯಿದ್ದಲ್ಲಿ, ಅವರು ನಿಮ್ಮ ಬಗೆಗೆ ಸರಿಯಾದ ಕಾಳಜಿ ವಹಿಸಲು ಸಹಾಯವಾಗುತ್ತದೆ. ಅವರೊಂದಿಗೆ ನಿಮ್ಮ ಲೈಂಗಿಕತೆ, ಲಿಂಗತ್ವ ಅಥವಾ ನೀವು ನಡೆಸುವ ಲೈಂಗಿಕ ಕ್ರಿಯೆಗಳ ವಿಷಯವಾಗಿ ಮಾತನಾಡಿದರೆ ಅವರು ನಿಮ್ಮ ಆರೋಗ್ಯಕ್ಕೆ ಸರಿಹೊಂದುವ ತಪಾಸಣೆಗಳನ್ನು ನಡೆಸಲು ಅನುಕೂಲವಾಗುತ್ತದೆ.
ನೆನಪಿಡಿ, ಚಿಕಿತ್ಸೆಯ ಸ್ಥಳದಲ್ಲಿ ಸುರಕ್ಷಿತ ಮತ್ತು ಗೌರವಯುತವಾದ ವಾತಾವರಣ ನಿಮ್ಮ ಹಕ್ಕು. ಒಂದೊಮ್ಮೆ ವೈದ್ಯರು ನಿಮ್ಮ ಲೈಂಗಿಕತೆ, ಲಿಂಗತ್ವ ಅಥವಾ ನೀವು ನಡೆಸುವ ಲೈಂಗಿಕ ಕ್ರಿಯೆ ತಪ್ಪು ಎಂಬ ಮಾತುಗಳನ್ನಾಡಿದರೆ, ಅವರಿಗೆ ನೀವು ಚಿಕಿತ್ಸೆಯ ಬಗೆಗೆ ಮಾತ್ರ ಮಾತನಾಡಬಯಸುತ್ತೀರಿ ಎಂಬುದನ್ನು ನಯವಾಗಿ ತಿಳಿಸಿರಿ.
ಹೆಚ್ಚಿನ ಮಾಹಿತಿಗಾಗಿ, ಗ್ರೇಟರ್ ದ್ಯಾನ್ ಏಡ್ಸ್ ನ ಈ ಒಂದು ನಿಮಿಷದ ವೀಡಿಯೋ ನೋಡಿ. (ಇಂಗ್ಲೀಷ್ ಭಾಷೆಯಲ್ಲಿನ ಮಾಹಿತಿಗಾಗಿ ಲಿಂಕ್)