ಎಚ್.ಐ.ವಿ ಎಂದರೆ ಹ್ಯೂಮನ್ ಇಮ್ಯುಮೋ ಡಿಫೀಶಿಯೆನ್ಸು ವೈರಸ್ ಎಂದರ್ಥ. ಈ ರೋಗಾಣುವು ನಿಮ್ಮ ದೇಹದ ರೋಗಪ್ರತಿರೋಧಕ ವ್ಯವಸ್ಥೆಯನ್ನ್ಯು ಬಲಹೀನವಾಗಿಸಿ, ನಿಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ತಡೆಯುಂಟು ಮಾಡುತ್ತದೆ. ಎಚ್.ಐ.ವಿ. ಮುಂದುವರೆದಂತೆಲ್ಲಾ, ಅಕ್ವೈರ್ಡ್ ಇಮ್ಯುನೋ ಡಿಪೀಶಿಯೆನ್ಸಿ ಸಿನ್ಡ್ರೋಮ್ (ಏಡ್ಸ್) ಉಂಟಾಗುವ ಸಂಭವವಿರುತ್ತದೆ.
ಅದೃಷ್ಟವಶಾತ್, ನಿಮ್ಮ ರೋಗಪ್ರತಿರೋಧಕ ವ್ಯವಸ್ಥೆಯನ್ನು ಶಕ್ತಿಶಾಲಿಯಾಗಿರಿಸಲು ಉತ್ತಮ ಚಿಕಿತ್ಸೆಗಳು ಲಭ್ಯವಿವೆ. ಚಿಕಿತ್ಸೆಯನ್ನು ಬೇಗನೇ ಆರಂಭಿಸಿ ಮುಂದುವರಿಸಿಕೊಂಡು ಹೋಗುವುದರ ಮೂಲಕ ಎಚ್.ಐ.ವಿಯನ್ನು ನಿರ್ವಹಿಸಬಹುದಾಗಿದೆ. ಈ ವಿಚಾರದಲ್ಲಿ ಹಲವು ಬೆಳವಣಿಗೆಗಳಾಗಿವೆ ಮತ್ತು ಆಗುತ್ತಿವೆ. ಪ್ರಸ್ತುತ ದಿನಮಾನದಲ್ಲಿ, ಔಷಧಗಳನ್ನು ಸರಿಯಾಗಿ ತೆಗೆದುಕೊಂಡರೆ, ಎಚ್.ಐ.ವಿ ಸೋಂಕಿತ (ಪಾಸಿಟಿವ್) ವ್ಯಕ್ತಿಗಳು ಸೋಂಕು ತಗುಲದೇ ಇರುವ ವ್ಯಕ್ತಿಗಳಷ್ಟೇ ಕಾಲ ಬದುಕಿರಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಗ್ರೇಟರ್ ದ್ಯಾನ್ ಏಡ್ಸ್ ನ ಈ ಒಂದು ನಿಮಿಷದ ವೀಡಿಯೋ ನೋಡಿ. (ಇಂಗ್ಲೀಷ್ ಭಾಷೆಯಲ್ಲಿನ ಮಾಹಿತಿಗಾಗಿ ಲಿಂಕ್)