ಈ ಪ್ರಶ್ನೆಗೆ ಉತ್ತರವು, ನೀವು ಯಾವ ಬಗೆಯ ಲಂಗಿಕ ಕ್ರಿಯೆ ನಡೆಸುತ್ತೀರಿ ಎಂಬುದರ ಮೇಲೆ ಅವಲಂಬಿಸಿದೆ. ಸಾಮಾನ್ಯವಾಗಿ ವೈದ್ಯರು ಎಚ್.ಐ.ವಿ ಪರೀಕ್ಷೆ, ಸಿಫಿಲಿಸ್ ಗಾಗಿ ರಕ್ತದ ತಪಾಸಣೆ ಮತ್ತು ಗುಪ್ತಾಂಗಗಳಲ್ಲಿ ಆಗಿರಬಹುದಾದ ಲೈಂಗಿಕ ಖಾಯಿಲೆಗಳ ಪತ್ತೆಗೆ ಮೂತ್ರದ ಪರೀಕ್ಷೆ ನಡೆಸುತ್ತಾರೆ. ನೀವು ಮುಖಮೈಥುನ ಮಾಡುತ್ತಿದ್ದರೆ, ನಿಮ್ಮ ವೈದ್ಯರು ನಿಮ್ಮ ಬಾಯಿಯ ಮತ್ತು ನೀವು ಶಿಶ್ನದಿಂದ ಇರಿಸಿಕೊಳ್ಳುವವರಾದರೆ (ಬಾಟಮ್ ) ನಿಮ್ಮ ಗುದದ್ವಾರದ ಸ್ವ್ಯಾಬ್ (ಆ ಭಾಗಗಳ ಮಾದರಿ ದ್ರವ ಪಡೆದುಕೊಳ್ಳುವುದು) ಮಾಡುತ್ತಾರೆಂಬುದನ್ನು ಖಚಿತ ಪಡಿಸಿಕೊಳ್ಳಿ.
ಹೆಪ್ಯಾಟೈಟಿಸ್ B ಯ ತಪಾಸಣೆ ಮತ್ತು ನೀವು ಎಚ್.ಐ.ವಿ ಪಾಸಿಟಿವ್ ಆಗಿದ್ದಲ್ಲಿ, ಮುಖ್ಯವಾಗಿ ಹೆಪ್ಯಾಟೈಟಿಸ್ C ಯ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ .
ಹೆಚ್ಚಿನ ಮಾಹಿತಿಗಾಗಿ, ಗ್ರೇಟರ್ ದ್ಯಾನ್ ಏಡ್ಸ್ ನ ಈ ಒಂದು ನಿಮಿಷದ ವೀಡಿಯೋ ನೋಡಿ. (ಇಂಗ್ಲೀಷ್ ಭಾಷೆಯಲ್ಲಿನ ಮಾಹಿತಿಗಾಗಿ ಲಿಂಕ್)