ಸಿ.ಡಿ.ಸಿ.ಯ ಶಿಫಾರಸಿನಿಂತೆ, ಒಬ್ಬರಿಗಿಂತ ಹೆಚ್ಚು ಸಂಗಾತಿಗಳಿರುವ ಸಲಿಂಗ ಮತ್ತು ಉಭಯಲಿಂಗಾಸಕ್ತ ಪುರುಷರು ಪ್ರತೀ ಮೂರರಿಂದ ಆರು ತಿಂಗಳಿಗೊಮ್ಮೆ ಎಚ್.ಐ.ವಿ. ಮತ್ತು ಲೈಂಗಿಕ ಸೋಂಕುಗಳ ತಪಾಸಣೆ ಮಾಡಿಸಬೇಕು. ನೀವು ಎಷ್ಟು ಮಂದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೀರಿ ಮತ್ತು ಯಾವ ಬಗೆಯ ಲೈಂಗಿಕ ಕ್ರಿಯೆ ನಡೆಸುತ್ತೀರಿ ಎಂಬುದನ್ನು ಅವಲಂಬಿಸಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ತಪಾಸಣೆಗೊಳಗಾಗಬಹುದು.
ಸಾಧ್ಯವಾದಷ್ಟೂ ಪರಿಪೂರ್ಣವಾದ ತಪಾಸಣೆಗಾಗಿ, ನೀವು ಲೈಂಗಿಕ ಕ್ರಿಯೆಯಲ್ಲಿ ಬಳಸುವ ಪ್ರತಿ ಅಂಗವನ್ನು ಪರೀಕ್ಷೆಗೊಳಪಡಿಸುವುದು ಸೂಕ್ತ. ನೀವು ಮುಖಮೈಥುನ ಮಾಡುತ್ತಿದ್ದಲ್ಲಿ, ನಿಮ್ಮ ಬಾಯಿಯ ಸ್ವ್ಯಾಬ್ ಪಡೆಯಲು ತಿಳಿಸಿರಿ, ಹಾಗೇ ನೀವು ಬಾಟಮ್ (ಗುದದೊಳಗೆ ಶಿಶ್ನವನ್ನು ಪಡೆಯುವುದು) ಮಾಡುತ್ತಿದ್ದಲ್ಲಿ ಅಥವಾ ಗುದದ್ವಾರದ ಮುಖಮೈಥುನ (rim) ಮಾಡಿಸಿಕೊಳ್ಳುತ್ತಿದ್ದರೆ, ಗುದಭಾಗದ ಸ್ವ್ಯಾಬ್ ಪಡೆಯಲು ತಿಳಿಸಿರಿ. ಜನನೇಂದ್ರಿಯಗಳನ್ನು ಸಾಮಾನ್ಯವಾಗಿ ಮೂತ್ರದ ಮೂಲಕವೇ ಪರೀಕ್ಷಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಗ್ರೇಟರ್ ದ್ಯಾನ್ ಏಡ್ಸ್ ನ ಈ ಒಂದು ನಿಮಿಷದ ವೀಡಿಯೋ ನೋಡಿರಿ. (ಇಂಗ್ಲೀಷ್ ಭಾಷೆಯಲ್ಲಿನ ಮಾಹಿತಿಗಾಗಿ ಲಿಂಕ್)