ಗುದದ್ವಾರ ಅಥವಾ ಯೋನಿಯ ಮೂಲಕ ನಡೆಸುವ ಲೈಂಗಿಕ ಕ್ರಿಯೆಗೆ ಹೋಲಿಸಿದರೆ, ಮುಖಮೈಥುನದಿಂದ ಎಚ್.ಐ.ವಿ. ಹರಡುವ ಸಾಧ್ಯತೆ ಬಹಳ ಕಡಿಮೆ. ಆದರೂ, ತೆರೆದ ಗಾಯ ಮತ್ತು ಹುಣ್ಣುಗಳ ಮೂಲಕ ರೋಗಾಣುವು ನಿಮ್ಮ ದೇಹವನ್ನು ಪ್ರವೇಶಿಸುವ ಸಾಧ್ಯತೆಯಿರುತ್ತದೆ. ಬಾಯಿಯ ಮೂಲಕ ಎಚ್.ಐ.ವಿ. ಸೋಂಕು ತಗುಲಿರುವ ಕೆಲವು ದಾಖಲೆಗಳಿವೆಯಾದರೂ ಅದು ಅತ್ಯಂತ ಅಪರೂಪದ ವಿದ್ಯಮಾನವಾಗಿದೆ.
ವಿವರವಾದ ಮಾಹಿತಿಗಾಗಿ ಈ ಸಂಪನ್ಮೂಲಗಳನ್ನು ನೋಡಿರಿ. (ಇಂಗ್ಲೀಷ್ ಭಾಷೆಯಲ್ಲಿನ ಮಾಹಿತಿಗಾಗಿ ಲಿಂಕ್)