ಚುಂಬನ, ಪರಸ್ಪರ ಹಸ್ಥಮೈಥುನ ಮತ್ತು ಸಲಿಂಗ ಗುಪ್ತಾಂಗಗಳ ಪರಸ್ಪರ ಉಜ್ಜುವಿಕೆಯಿಂದ ಎಚ್.ಐ.ವಿ ಹರಡುವ ಅಪಾಯವಿರುವುದಿಲ್ಲ. ಮುಖಮೈಥುನ, ಗುದಚುಂಬನ, ಮತ್ತು ಕಾಂಡೋಂ ಬಳಸಿ ನಡೆಸುವ ಸಂಭೋಗದಲ್ಲಿ (ಶಿಶ್ನದಿಂದ ಇರಿಯುವುದು (ಟಾಪ್) ಮತ್ತು ಇರಿಸಿಕೊಳ್ಳುವುದು (ಬಾಟಮ್)) ಎಚ್.ಐ.ವಿ ಉಂಟಾಗುವ ಅಪಾಯ ಕಡಿಮೆ ಮತ್ತು ಕಾಂಡೋಂ ಬಳಸದೇ ಮಾಡುವ ಗುದ-ಶಿಶ್ನಗಳ (ಶಿಶ್ನದಿಂದ ಇರಿಯುವುದು ಮತ್ತು ಇರಿಸಿಕೊಳ್ಳುವುದು) ಸಮಾಗಮದಲ್ಲಿ ಎಚ್.ಐ.ವಿ ಉಂಟಾಗುವ ಅಪಾಯ ಹೆಚ್ಚಾಗಿರುತ್ತದೆ.
ಇದು ಕೇವಲ ಎಚ್.ಐ.ವಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಇತರ ಲೈಂಗಿಕ ರೋಗಗಳಾದ ಸಿಫಿಲಿಸ್, ಗನೋರಿಯಾ, ಕ್ಲಮೈಡಿಯಾ ಅಥವಾ ಹೆಪಾಟೈಟಿಸ್ ಗೆ ಅನ್ವಯವಾಗುವುದಿಲ್ಲ.