ವಿಜ್ಞಾನದ ಪ್ರಕಾರ ರೋಗಪತ್ತೆಯಾಗದ ಎಚ್.ಐ.ವಿ ಸೋಂಕಿತ ವ್ಯಕ್ತಿಯು ಆರೋಗ್ಯವಂತರಾಗಿರುತ್ತಾರೆ ಮಾತ್ರವಲ್ಲ, ಅವರು ಎಚ್.ಐ.ವಿ ಸೋಂಕನ್ನು ಯಾರಿಗೂ ಹರಡುವುದು ಕೂಡ ಸಾಧ್ಯವಿಲ್ಲ ಎಂಬುದು ಖಚಿತವಾಗಿದೆ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ ರೋಗಪತ್ತೆಯಾಗದವರು (ಅನ್ ಡಿಟೆಕ್ಟೆಬಲ್) = ರೋಗ ಹರಡಲಾಗದವರು (ಅನ್ ಟ್ರ್ಯಾನ್ಸ್ಮಿಟೆಬಲ್) (U=U)
ಇದು ಎಚ್.ಐ.ವಿ.ಯ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲಾಗಿದೆ. ಇದರ ಪ್ರಕಾರ, ಎಚ್.ಐ.ವಿ ಇದ್ದೂ ರೋಗಪತ್ತೆಯಾಗದ ವ್ಯಕ್ತಿಗಳು ತಮ್ಮ ಲೈಂಗಿಕ ಸಂಗಾತಿಗಳಿಗೆ ಸೋಂಕನ್ನುಂಟುಮಾಡುವ ಬಗೆಗೆ ಯಾವುದೇ ಭಯ ಪಡುವ ಅಗತ್ಯವಿರುವುದಿಲ್ಲ. ಎಚ್.ಐ.ವಿಯೊಂದಿಗೆ ಬದುಕುತ್ತಿರುವ ವ್ಯಕ್ತಿಗಳು ತಮ್ಮ ದಿನನಿತ್ಯದ ಔಷಧಗಳನ್ನು ತೆಗೆದುಕೊಂಡು ಆರೋಗ್ಯವಾಗಿರುವುದರ ಮೂಲಕವೇ ಎಚ್.ಐ.ವಿ. ಸಮಸ್ಯೆಗೆ ಪರಿಹಾರ ಹುಡುಕುವ ಪ್ರಕ್ರಿಯೆಯಲ್ಲಿ ಪಾಲುದಾರರಾಗಬಹುದು.
ಹೆಚ್ಚಿನ ಮಾಹಿತಿಗಾಗಿ www.UequalsU.org ಮತ್ತು Building Healthy Online Communities ಅನ್ನು ನೋಡಿ.